Friday, January 13, 2012

ಪಬ್ಲಿಕ್ ಟಿವಿ - ಇದು ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ

1. "ಇದು ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ" ಘೋಷವಾಕ್ಯ ಹೊಂದಿರುವ ವಾಹಿನಿಯು ಜನತೆಯಿಂದ ಜನತೆಗಾಗಿ ಜನತೆಗೋಸ್ಕರ ಮೂಡಿಬರುತ್ತಿರುವ ಟಿವಿ.
2. ಪತ್ರಿಕೋದ್ಯಮದ ಮೌಲ್ಯಗಳನ್ನು ಎತ್ತಿಹಿಡಿಯುವುದು, ಕಂಪನಿ ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಪಾಡುವುದು ಹಾಗೂ ಸಾರ್ವಜನಿಕರ ಆಶೋತ್ತರಗಳಿಗೆ ಕನ್ನಡಿಯಾಗುವುದು ನಮ್ಮ ಕಾಯಕ. ನಮ್ಮದು ಪತ್ರಕರ್ತರ ಚಿಂತನೆಗಳಿಂದ ಪ್ರೇರಿತವಾದ ಟಿವಿ.
3. ಒಂದು ಟಿವಿ ಚಾನಲ್ ಪ್ರಾರಂಭಿಸಬೇಕಾದರೆ 40-45 ಕೋಟಿ ರೂ ಅಗತ್ಯ ಎಂದು ಹೇಳುವುದಿದೆ. 100-150 ಕೋಟಿ ರೂ ಬಂಡವಾಳ ಅಗತ್ಯ ಎಂದು ಕೆಲವರು ಉತ್ಪ್ರೇಕ್ಷೆ ಮಾಡುವುದುಂಟು. ಆದರೆ ನಾವೇ ಬೇರೆ, ನಮ್ಮ ಸ್ಟೈಲೇ ಬೇರೆ.
4.ನಾಲ್ಕಾರು ಮಂದಿ ಉದ್ಯಮಶೀಲರು ಕಲೆತು ಆರಂಭಿಸಿರುವ Writemen Media Pvt Ltd ಸಂಸ್ಥೆ ಪಬ್ಲಿಕ್ ಟಿವಿಯನ್ನು ಸಾದರಪಡಿಸುತ್ತಿದೆ. ರಂಗನಾಥ್ ಅವರು ಸಂಸ್ಥೆಯ ಛೇರ್ಮನ್ ಮತ್ತು ಕಾರ್ಯನಿರ್ವಾಹಕ ಸಂಪಾದಕ.
5. ರಾಜಕಾರಣಿ ಅಥವಾ ಒಂದು ರಾಜಕೀಯ ಪಕ್ಷದ ಬಂಡವಾಳ/ ಹಸ್ತಕ್ಷೇಪವಿಲ್ಲದೆ ತೆರೆಕಾಣುತ್ತಿರುವುದು ಪಬ್ಲಿಕ್ ಟಿವಿ ಚಾನಲ್ಲಿನ ಒಂದು ವೈಶಿಷ್ಟ್ಯ. ಕನ್ನಡ ಟಿವಿ ಮಾರುಕಟ್ಟೆಯಲ್ಲಿ ಒಟ್ಟು 7 ವಾಹಿನಿಗಳಿವೆ. ಅವುಗಳ ಒಡೆತನದ ವಿವರಗಳು ಸ್ಥೂಲವಾಗಿ ಕೆಳಕಂಡಂತಿದೆ.

ಉದಯ ಟಿವಿ (ದಯಾನಿಧಿ ಮಾರನ್ - ಡಿಎಂಕೆ),
ಈ ಟಿವಿ (ರಾಮೋಜಿರಾವ್ - ಅಂಬಾನೀಸ್),
ಜನಶ್ರೀ ಟಿವಿ (ಜನಾರ್ದನ ರೆಡ್ಡಿ - ಭಾಜಪ),
ಕಸ್ತೂರಿ ಟಿವಿ (ಅನಿತಾ ಎಚ್ ಡಿ ಕುಮಾರಸ್ವಾಮಿ ಜೆಡಿಎಸ್),
ಸಮಯ ಟಿವಿ (ಮುರುಗೇಶ್ ನಿರಾಣಿ, ಭಾಜಪ),
ಟಿವಿ9 (ಶ್ರೀನಿರಾಜು, ಉದ್ಯಮಿ),
ಸುವರ್ಣ ಟಿವಿ (ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯ, ಪಕ್ಷೇತರ).

No comments:

Post a Comment